
25th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.24-ದೇಶದ ಮಹಾನ್ ನಾಯಕರ ವ್ಯಕ್ತಿತ್ವ ಸ್ಪೂರ್ತಿದಾಯಕವಾಗಿದ್ದು, ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಸವೇಶ್ವರ ಇಂಜಿನಿಯರಿAಗ್ ಕಾಲೇಜ್ ನಿವೃತ್ತ ಪ್ರಾಧ್ಯಾಪಕರಾದÀ ಶ್ರೀಲತಾ ರಾವ್ ಹೇಳಿದರು.
ನಗರದ ಬಿ.ವಿ.ವಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗ ಘಟಕ ಹಾಗೂ ಅಮೃತ ಪ್ರತಿಷ್ಠಾನ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಬಾಗಲಕೋಟೆ ಇವರ ಸಹಯೋಗದಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದÀರು.
ಮಾನವನ ಶರೀರ ಅಪ್ರತಿಮ ಶಕ್ತಿಯಿಂದ ಕೂಡಿದ್ದು ಆ ಶಕ್ತಿಯನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಜೀವನದ ಒಂದು ಕಲೆ. ದೇಶದ ಮಹಾನ್ ನಾಯಕರ ವ್ಯಕ್ತಿತ್ವ ನಿಮಗೆ ಸ್ಪೂರ್ತಿಯಾಗಲಿ. ಸಕಾರಾತ್ಮಕ ಆಲೋಚನೆಗಳೊಂದಿಗೆ ವಿದ್ಯಾರ್ಥಿಗಳು ಯಾವತ್ತೂ ಸಮಯಕ್ಕೆ ಮಹತ್ವ ಕೊಡಬೇಕೆಂದರು.
ಮುಖ್ಯ ಅತಿಥಿ ಎಸ್.ಆರ್.ನರಸಾಪುರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ವಿ.ಪರ್ವತಿಕರ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನಾಲ್ಕು ಮುಖ್ಯ ಸಂಗತಿಗಳು ಅವಶ್ಯಕವಾಗಿವೆ. ಅವು ಆತ್ಮವಿಶ್ವಾಸ, ಏಕಾಗ್ರತೆ ,ಸಮರ್ಪಣೆ, ಸೃಜನಶೀಲತೆ ಇವುಗಳಿಂದ ವಿದ್ಯಾರ್ಥಿಗಳ ಬದುಕು ಸುಂದರವಾಗಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಎಸ್.ಜೆ.ಒಡೆಯರ್, ನಿಸರ್ಗದ ಪ್ರತಿಯೊಂದು ಜೀವಿಯಲ್ಲಿಯೂ ಒಂದೊAದು ಕಲೆ ಇದೆ ಅದರಲ್ಲಿಯೂ ಮನುಷ್ಯ ಅತ್ಯಂತ ಬುದ್ಧಿವಂತನಾದ ಜೀವಿ. ತನ್ನಲ್ಲಿರುವ ಜ್ಞಾನ ಸಾಮರ್ಥ್ಯವನ್ನು ಬಳಸಿಕೊಂಡು ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸಿ ವಿಶೇಷವಾದ ಕಲೆಗಳ ಮೂಲಕ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
Pಸ್ಪೂರ್ತಿ ತುರುಡಗಿ ಪ್ರಾರ್ಥಿಸಿದರು, ಪಿ.ಕೆ.ಚೌಗಲಾ ಸ್ವಾಗತಿಸಿದರು, ಸಂಯೋಜಕಿ ಸೀಮಾ ಚಾವುಸ್, ಪೂಜಾ ಅರಕಸಾಲಿ ನಿರೂಪಿಸಿದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ